World Emoji Day 2021: ಇನ್ಮುಂದೆ Facebookನಲ್ಲಿನ Emojiಗಳು ಮಾತನಾಡುವ ಮೂಲಕ ಭಾವನೆ ವ್ಯಕ್ತಪಡಿಸಲಿವೆ

World Emoji Day 2021: ವಿಶ್ವದ ಖ್ಯಾತ ಸಾಮಾಜಿಕ ಜಾಲತಾಣ Facebook ಶೀಘ್ರದಲ್ಲಿಯೇ ಒಂದು ಸಂಪೂರ್ಣ ಸೌಂಡ್ ಇಮೊಜಿ ಲೈಬ್ರರಿ (Sound Emoji Liberary) ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಈ ಲೈಬ್ರರಿಯಿಂದ ನೀವು ವಿವಿಧ ಸೌಂಡ್ ಇಮೊಜಿಗಳನ್ನು (Sound Emoji) ಆಯ್ಕೆ ಮಾಡಬಹುದಾಗಿದೆ. ಹಾಗಾದರೆ ಬನ್ನಿ ಇದಕ್ಕೆ ಸಂಬಂಧಿಸಿದ ಕೆಲ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ. 

Written by - Nitin Tabib | Last Updated : Jul 16, 2021, 03:15 PM IST
  • Facebook Messangerನಲ್ಲಿನ ನಿಮ್ಮ ಚಾಟ್ ಅನುಭವ ಇನ್ನಷ್ಟು ಸ್ವಾರಸ್ಯಕರವಾಗಲಿದೆ.
  • ಏಕೆಂದರೆ ಇನ್ಮುಂದೆ ಇಮೊಜಿಗಳು ಮಾತನಾಡುತ್ತ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿವೆ.
  • ಮಾತನಾಡುವ ಇಮೊಜಿ ಗಳನ್ನು ನೀವು ಈ ರೀತಿ ಬಳಕೆ ಮಾದಬಹುದು.
World Emoji Day 2021: ಇನ್ಮುಂದೆ Facebookನಲ್ಲಿನ Emojiಗಳು ಮಾತನಾಡುವ ಮೂಲಕ ಭಾವನೆ ವ್ಯಕ್ತಪಡಿಸಲಿವೆ title=
Facebook Sound Emoji (Image Courtesy - Facebook Video Grab)

ನವದೆಹಲಿ: World Emoji Day 2021 - ಇನ್ಮುಂದೆ ನಿಮಗೆ ನಿಮ್ಮ ಹೃದಯದ ಅನಿಸಿಕೆಗಳನ್ನೂ ಹೇಳಲು Facebook ಮೇಲೆ Emojiಗಳನ್ನು ಕಳುಹಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಇನ್ಮುಂದೆ ಇಮೊಜಿಗಳು ನಿಮ್ಮ ಮನಸಿನ ಭಾವನೆಗಳನ್ನು ವ್ಯಕ್ತಪಡಿಸಲಿವೆ. Facebook ಪ್ರಕಾರ ಜನರು ಸುಮಾರು 2.4 ಬಿಲಿಯನ್ ಇಮೊಜಿ ಸಂದೇಶಗಳ ಮೂಲಕ ಫೇಸ್ ಬುಕ್ ಮೆಸೆಂಜರ್ ನಲ್ಲಿ ಸಂವಹನ ಸಾಧಿಸುತ್ತಾರೆ ಎನ್ನಲಾಗಿದೆ. ವಿಶ್ವ ಇಮೊಜಿ ದಿನದ ಅಂಗವಾಗಿ ಫೇಸ್ ಬುಕ್ ತನ್ನ ಮೆಸೆಂಜರ್ ಆಪ್ ನಲ್ಲಿ ಸೌಂಡ್ ಇಮೊಜಿಗಳನ್ನು ಪ್ರಸ್ತುತಪಡಿಸಿದೆ.

ಇವು ಯಾವ ರೀತಿ ಸೌಂಡ್ ಮಾಡಲಿವೆ? (Facebook Sound Emoji)
ಮೆಸೆಂಜರ್ (Facebook Messenger) ಚಾಟ್‌ಗಳಲ್ಲಿ ಸಣ್ಣ ಧ್ವನಿ ತುಣುಕುಗಳನ್ನು ಕಳುಹಿಸಲು ಸೌಂಡ್ ಎಮೋಜಿ ನಿಮಗೆ ಅನುಮತಿಸುತ್ತದೆ. ಇದು ಚಪ್ಪಾಳೆ ತಟ್ಟುವಿಕೆಯಿಂದ ನಗುವವರೆಗಿನ ಶಬ್ದಗಳನ್ನು ಒಳಗೊಂಡಿರುತ್ತದೆ. ರೆಬೆಕ್ಕಾ ಬ್ಲ್ಯಾಕ್‌ನ ಧ್ವನಿಯಿಂದ ಹಿಡಿದು ಟಿವಿ ಕಾರ್ಯಕ್ರಮಗಳವರೆಗೆ, ನೆಟ್‌ಫ್ಲಿಕ್ಸ್ ಕಾರ್ಯಕ್ರಮಗಳ ಧ್ವನಿಗಳು ಸಹ ಇದರಲ್ಲಿ ಶಾಮೀಲಾಗಿವೆ. ಈ ಮಾಹಿತಿಯನ್ನು ಬ್ಲಾಗ್ ಪೋಸ್ಟ್ ಮೂಲಕ ನೀಡಲಾಗಿದೆ.

ಇದನ್ನೂ ಓದಿ-ಭಾರತದಲ್ಲಿ ಮೇ 15 ರಿಂದ ಜೂನ್ 15 ರ ನಡುವೆ 20 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳ ನಿಷೇಧ

ಸೌಂಡ್ ಇಮೊಜಿಗಳನ್ನು ಹೇಗೆ ಬಳಸಬೇಕು?
>> ಸೌಂಡ್ ಇಮೊಜಿಗಳನ್ನು (Sounding Emoji) ಬಳಸಲು ಮೊದಲು ನೀವು ಮೆಸೆಂಜರ್ ನಲ್ಲಿ ಚಾಟ್ ಆರಂಭಿಸಬೇಕು.
>> ಬಳಿಕ ನೀವು ಸ್ಮೈಲಿ ಐಕಾನ್ ಕ್ಲಿಕ್ಕಿಸಬೇಕು.
>> ಇದಾದ ಬಳಿಕ ನೀವು ಲೌಡ್ ಸ್ಪೀಕರ್ ಐಕಾನ್ ಮೇಲೆ ಕ್ಲಿಕ್ಕಿಸಬೇಕು. 
>> ಇಲ್ಲಿ ನಿಮಗೆ ಸೌಂಡ್ ಇಮೊಜಿಗಳ ಕುರಿತು ಮಾಹಿತಿ ಸಿಗಲಿದೆ ಮತ್ತು ನೀವು ಅವುಗಳನ್ನು ಕಳುಹಿಸಬಹುದು.

ಇದನ್ನೂ ಓದಿ-WhatsApp Multi-Device Support Rolled Out: ಬಿಡುಗಡೆಯಾಗಿದೆ ವಾಟ್ಸ್ ಆಪ್ ನ ಈ ಬಹುನಿರೀಕ್ಷಿತ ವೈಶಿಷ್ಟ್ಯ, ನಿಮಗೂ ಸಿಕ್ಕಿದೇಯಾ ಪರೀಕ್ಷಿಸಿ

ಸೌಂಡ್ ಇಮೊಜಿ ಗ್ರಂಥಾಲಯ
ಶೀಘ್ರದಲ್ಲಿಯೇ ಒಂದು ಸಂಪೂರ್ಣ ಸೌಂಡ್ ಇಮೊಜಿ ಲೈಬ್ರರಿಯನ್ನು ಬಿಡುಗಡೆ ಮಾಡುವುದಾಗಿ Facebook ಘೋಷಿಸಿದೆ. ಈ ಲೈಬ್ರರಿಯಿಂದ (Sounding Emoji Library) ನೀವು ವಿವಿಧ ಸೌಂಡ್ ಇಮೊಜಿಗಳನ್ನು ಆಯ್ಕೆ ಮಾಡಬಹುದು. ಅಷ್ಟೇ ಅಲ್ಲ ನಿಯಮಿತ ರೂಪದಲ್ಲಿ ಈ ಲೈಬ್ರರಿಯನ್ನು ಅಪ್ಡೇಟ್ ಮಾಡಲಾಗುವುದು ಎಂದೂ ಕೂಡ ಫೇಸ್ಬುಕ್ ಹೇಳಿದೆ. ಈ ಲೈಬ್ರರಿಯಲ್ಲಿ ಖ್ಯಾತ ಸೌಂಡ್ ಎಫೆಕ್ಟ್ ಹಾಗೂ ಸೌಂಡ್ ಬೈಟ್ ಗಳನ್ನು ಸೇರಿಸಲಾಗುವುದು ಎಂದು ಫೇಸ್ಬುಕ್ ಹೇಳಿದೆ.

ಇದನ್ನೂ ಓದಿ-WhatsApp Banking: ಯಾವ ಬ್ಯಾಂಕ್ ಗ್ರಾಹಕರಿಗೆ ಲಭ್ಯವಿದೆ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News